ಅಳುಗುಳಿ ಮಣೆ – ಅಜ್ಜಿ ಆಟ

  1. ಇದನ್ನು ಎಂದೂ ಮುಗಿಯದ ಆಟ, ಅಜ್ಜಿ ಮುಗ್ಗರಿಸದ ಆಟ, ಸೀತೆ ಆಟ ಅಂತಲೂ ಕರೆಯುತ್ತಾರೆ. ಸೀತೆಯು ಅಶೋಕವನದಲ್ಲಿ ಇದ್ದಾಗ , ಬೇಸರ ಕಳೆಯಲು ಈ ಆಟವನ್ನು ಆಡುತಿದ್ದಳು ಅನ್ನುವ ಪ್ರತೀತಿ ಇದೆ.
  2. ಈ ಆಟವನ್ನು ಯಾರು ಜೊತೆಯಿಲ್ಲ, ಒಬ್ಬರೇ ಆಡಬೇಕುಅಂದಾಗ ಮಾತ್ರ. 
  3. ೭ ಗುಣಿಯ ಮನೆಗೆ ೯ ಕಾಯಿಗಳು ಇರಬೇಕು. 
  4. ಇಲ್ಲಿ ಕಾಳುಗಳನ್ನು 2,1,0,1,0,1,0,1,0,1,0,1 ರೀತಿಯಲ್ಲಿ ಹಂಚಬೇಕು.
  5. ಶುರುವಿನಲ್ಲಿ ೨ ಕಾಯಿಗಳು ಇರುವ ಮನೆಯಿಂದ ತೆಗೆದು ಹಂಚುತ್ತಾ ಹೋಗಬೇಕು. 
  6. ಕೈಯಲ್ಲಿ ಹರಳು ಮುಗಿದ ತಕ್ಷಣ ಮುಂದಿನ ಮನೆಯಿಂದ ತೆಗೆದು ಹಂಚಬೇಕು. 
  7. ಈ ಆಟದಲ್ಲಿ ಎಲ್ಲೂ ನಮಗೆ ಖಾಲಿ ಮನೆ ಸಿಗುವುದಿಲ್ಲ.