ಅಳುಗುಳಿ ಮಣೆ – ಜೋಡಿ ಹೆಗ್ಗೆ ಆಟ

  1. ಈ ಆಟವನ್ನು  ಜೋಡಿ ಹೆಗ್ಗೆ ಆಟ/ ಜೋಡಿ ಪೆಗ್ಗದ/ ಜೋಡಿ ಪೆರ್ಗ ಆಟ/ ಜೋಡಿ ಮನೆ ಆಟ ಅಂತಲೂ ಕರೆಯುತ್ತಾರೆ. ಆಡುವ ವಿಧಾನ ಹೆಗ್ಗೆ ಆಟದಂತೆಯೇ. ಖಾಲಿ ಮನೆಯ ಮುಂದಿನ ಮತ್ತು ಎದರು ಮನೆಯ ಕಾಯಿಗಳನ್ನು ಪೂರ್ತಿ ತೆಗೆದು ಇಟ್ಟುಕೊಳ್ಳಬೇಕು. 
  2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೫೬ ಕಾಯಿಗಳು ಇರಬೇಕು.
  3. ಪ್ರತಿಯೊಂದು ಮನೆಗೆ ೪ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ.
  4. ಆಟಗಾರ ೧ ಯಾವುದಾದರೊಂದು  ಮನೆಯಿಂದ ಕಾಳುಗಳನ್ನು ತೆಗೆದು ಒಂದೊಂದೇ ಕಾಳುಗಳನ್ನು ಒಂದು ಮನೆಯೊಳಗೆ ಹಾಕುತ್ತ ಅಪ್ರದಕ್ಷಿಣವಾಗಿ ಸಾಗಬೇಕು.
  5. ಕಾಳುಗಳು ಹಾಕಿ, ಮುಗಿದ ಮುಂದಿನ ಮನೆಯಿಂದ ಕಾಳುಗಳನ್ನು ತೆಗೆದು ಮತ್ತೆ ಹಂಚುತ್ತಾ ಹೋಗಬೇಕು. 
  6. ಕೊನೆಯ ಕಾಳನ್ನು ಹಂಚಿ, ಮುಂದಿನ ಗುಳಿ ಖಾಲಿ ಇದ್ದರೆ, ಆದರೆ ಮುಂದಿನ ಗುಳಿಯಲ್ಲಿರುವ ಕಾಯಿಗಳನ್ನು ಮತ್ತು ಮೇಲೆಇನ ಮನೆಯಲ್ಲಿರುವ ಕಾಯಿಗಳನ್ನು ಆಡುತ್ತಿದ್ದವರು ತೆಗೆದುಕೊಳ್ಳಬೇಕು. ಇದಕ್ಕೆ  ಜೋಡಿ ಪೆತ್ತ/ಹೆಗ್ಗ/ಪಂತ/ಪಣತ ತೆಗೆದುಕೊಳ್ಳುವುದು ಅಂತ ಹೇಳುತ್ತಾರೆ. 
  7. ಆಟ ಆಡುವಾಗ, ಆಟಗಾರರು ಅವರವರ ಬದಿಯಲ್ಲಿ ಆಗುವ ಕರುಗಳನ್ನು ತೆಗೆದು ಕೊಳ್ಳಬಹುದು.
  8. ಯಾರೇ ಆಟ ಆಡುತ್ತಿರಲಿ, ಕರುಗಳು ಆ ಬದಿಯ ಆಟಗಾರರಿಗೆ ಸೇರಿದ್ದು. ಕರು ಕೊಳೆಯುವ ಮುಂಚೆ ತೆಗೆದುಕೊಳ್ಳಬೇಕು. 
  9. ಹೀಗೆ ಆಟ ಮುಗಿಯುವ ತನಕ ಆಡಬೇಕು. ಅಂದ್ರೆ, ಯಾವುದಾದರೂ ಒಂದು ಬದಿಯಲ್ಲಿ ಕಾಳುಗಳು ಖಾಲಿಯಾಗಬೇಕು, ಎದುರಾಳಿಗೆ ಆಟ ಆಡಲು ಗುಳಿಗಳೇ ಇರುವುದಿಲ್ಲ ಅಥವಾ ಒಂದೇ ಗುಳಿಯಲ್ಲಿ ಕಾಯಿಗಳು ಇರಬೇಕು.