ಅಳುಗುಳಿ ಮಣೆ – ಕರು ಬಾಚುವ ಆಟ

 1. ಈ ಆಟವನ್ನು ಕರು ತೆಗೆದುಕೊಳ್ಳುವ, ಕರು ಬರುವ ಆಟ ಎಂದೆಲ್ಲ ಕರೆಯುತ್ತಾರೆ. ಕೆಲಕಡೆ  ಎಮ್ಮೆ ಇಯೋದು ಅಂತ ಕರೆಯುತ್ತಾರೆ.
 2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೫೬ ಕಾಯಿಗಳು ಇರಬೇಕು.
 3. ಪ್ರತಿಯೊಂದು ಮನೆಗೆ ೪ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ.
 4. ಆಟಗಾರ ೧ ಯಾವುದಾದರೊಂದು  ಮನೆಯಿಂದ ಕಾಳುಗಳನ್ನು ತೆಗೆದು ಒಂದೊಂದೇ ಕಾಳುಗಳನ್ನು ಒಂದು ಮನೆಯೊಳಗೆ ಹಾಕುತ್ತ ಅಪ್ರದಕ್ಷಿಣವಾಗಿ ಸಾಗಬೇಕು. 
 5. ಯಾವ ಮನೆಯಲ್ಲಿ ಕೈಯಲ್ಲಿರುವ ಕಾಲುಗಳು ಮುಗಿಯುತ್ತದೆಯೋ, ಆ ಮನೆಯ ಕಾಳುಗಳನ್ನು ತೆಗೆದು ಆಡುತ್ತ ಹೋಗಬೇಕು.  (ಗಮನಿಸಿ ಸಾದಾ ಆಟದಲ್ಲಿ ಮುಂದಿನ ಮನೆಯ ಕಾಲುಗಳನ್ನು ತೆಗೆದು ಹಂಚುತ್ತೇವೆ. )
 6. ಆಟ ಆಡುತ್ತಿರವಾಗ, ಯಾವುದಾದರೂ ಮನೆಯಲ್ಲಿ ೪ ಕಾಳುಗಳು ಆದ್ರೆ , ಆಟಗಾರ ತೆಗೆದು ಕೊಲ್ಲುತ್ತಾನೆ. 
 7. ಕರು ಯಾವ ಬದಿಯಲ್ಲೂ ಆದರೂ, ಆಡುತ್ತಿರುವ ಆಟಗಾರ ತೆಗೆದುಕೊಳ್ಳಬಹುದು. 
 8. ಸನ್ನಿವೇಶ ೧: ಆಡುವಾಗ ಕೈಯಲ್ಲಿ ಒಂದು ಕಾಳಿರಬಹುದು, ಮುಂದಿನ ಮನೆ ಖಾಲಿಯಿರಬಹುದು. ಆಗ ಖಾಲಿ ಮನೆಯಲ್ಲಿ ಕಾಳು ಹಾಕಿ , ಎದುರಾಳಿಗೆ ಆಟ ಬಿಟ್ಟು ಕೊಡಬೇಕು.
 9. ಸನ್ನಿವೇಶ ೨: ಕೈಯಲ್ಲಿ ಒಂದು ಕಾಳಿದೆ, ಮುಂದಿನ ಮನೆಯಲ್ಲಿ ೩ ಕಾಯಿಗಳು ಇದೆ. ಅದರ ಮುಂದಿನ ಮನೆ ಖಾಲಿ ಇದೆ ಎಂದು ಕೊಳ್ಳಿ . ಆಗ ಕಾಳನ್ನು ಮುಂದಿನ ಮನೆಗೆ ಹಾಕಿದಾಗ ಕರು ಹುಟ್ಟುತ್ತದೆ. ಆ ಕರುವನ್ನು ಎತ್ತಿಕೊಂಡು ಎದುರಾಳಿಗೆ ಆಟವನ್ನು  ಬಿಡಬೇಕು.
 10. ಆಟ ಆಡುವ ಅವಸರದಲ್ಲಿ ಕರು ಎತ್ತಿಕೊಳ್ಳುವುದು ಮರೆತರೆ ಅಥವಾ ಇನ್ನೊಂದು ಕಾಯಿ ಹಾಕಿಬಿಟ್ಟರೆ, ಕಾರು ಕೊಳೆತು ಹೋಗುತ್ತದೆ. ಇದನ್ನು ಯಾರು ತೆಗೆದುಕೊಳ್ಳಲು ಬರುವುದಿಲ್ಲ. ಇದನ್ನು ಕರು ಕೊಳೆಯುವುದು ಎನ್ನುತ್ತಾರೆ.
 11. ಎದುರಾಳಿ ಆಟಗಾರನು ಕರು ಆಗಿದ್ದು ನೋಡಿ ಸುಮ್ಮನಿರುವನು. (ಅವನಿಗೆ ಮತ್ತಷ್ಟು ಕಾಯಿಗಳನ್ನು ಬಾಚಿಕೊಳ್ಳಲು ಒಂದು ಅವಕಾಶ ಅಲ್ಲವೇ. )
 12. ಆಟದ ಸುತ್ತು ಮುಗಿದ ಮೇಲೆ, ಎಲ್ಲ ಕರು ಕಾಯಿಗಳನ್ನು ಅವರ ಅವರ ಮನೆಗೆ ತುಂಬುವರು. ಕಮ್ಮಿ ಕರು ಕಾಯಿಗಳ ಪಡೆದವರ ಬದಿಯಲ್ಲಿ ಕೆಲ ಮನೆಗಳು ಖಾಲಿ ಹಾಗೆಯೇ ಇರುತ್ತದೆ. ಆಟಕ್ಕೆ ಉಪಯೋಗಿಸುವಂತೆ ಇಲ್ಲ. ಉದಾ: ಆಟಗಾರ ೧ ಹತ್ತಿರ ೧೯ಕಾಳುಗಳು ಇರುವುದು. ಆಟಗಾರ ೨ ಹತ್ತಿರ ೩೭ ಕಾಲುಗಳು ಇರುವುದು. ಆಟಗಾರ ೧ ಬದಿಯಲ್ಲಿ ೪ ಮನೆಗಳಿಗೆ ಮಾತ್ರ ಕಾಳುಗಳನ್ನು ಹಂಚಲು ಆಗವುದು. ಆಟಗಾರ ೨ ಬದಿಯಲ್ಲಿ ೭ ಮನೆಗೆ ಕಾಲುಗಳನ್ನು ಹಂಚುತ್ತಾನೆ.  ಒಟ್ಟು ೧೪ ಗುಳಿಗಳಲ್ಲಿ ಕೇವಲ ೧೧ ಗುಳಿಗಳಲ್ಲಿ ಆಟ ಆಡಬೇಕು. 
 13. ಆಟ ಮತ್ತೆ ೪-೧೨ ರಂತೆಯೇ ಮುಂದುವರಿಸಬೇಕು.
 14. ಒಮ್ಮೆ ಮುಂದಿನ ಸುತ್ತಿನಲ್ಲಿ ಹೆಚ್ಚು ಕರು ಪಡೆದರೆ,ಬಿಟ್ಟ ಗುಳಿಗಳನ್ನು ಸೇರಿಸಿ ಆಡಬಹುದು. 
 15. ಹೆಚ್ಚು ಕರು ಪಡೆದವರು ಗೆದ್ದಂತೆ. 

ಹೆಗ್ಗೆ ಆಟ 

 1.  ಈ ಆಟವನ್ನು  ಹೆಗ್ಗೆ ಆಟ / ಪೆಗ್ಗದ ಆಟ ಸಹ ಕರೆಯುತ್ತಾರೆ. ಪೆಗ್ಗ ಅಂದ್ರೆ ನಿಧಿ, ರಾಶಿ ಅಂತ ತುಳು ಭಾಷೆಯಲ್ಲಿ ಹೇಳುತ್ತಾರೆ. ಆದ್ದರಿಂದ ಇಲ್ಲಿ ಕಾಯಿಗಳ ರಾಶಿಯೇ ನಮಗೆ ನಿಧಿ i.e. ಹೆಗ್ಗೆ, ಪೆಗ್ಗ. 
 2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೫೬ ಕಾಯಿಗಳು ಇರಬೇಕು.
 3. ಪ್ರತಿಯೊಂದು ಮನೆಗೆ ೪ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ.
 4. ಆಟಗಾರ ೧ ಯಾವುದಾದರೊಂದು  ಮನೆಯಿಂದ ಕಾಳುಗಳನ್ನು ತೆಗೆದು ಒಂದೊಂದೇ ಕಾಳುಗಳನ್ನು ಒಂದು ಮನೆಯೊಳಗೆ ಹಾಕುತ್ತ ಅಪ್ರದಕ್ಷಿಣವಾಗಿ ಸಾಗಬೇಕು.
 5. ಕಾಳುಗಳು ಹಾಕಿ, ಮುಗಿದ ಮುಂದಿನ ಮನೆಯಿಂದ ಕಾಳುಗಳನ್ನು ತೆಗೆದು ಮತ್ತೆ ಹಂಚುತ್ತಾ ಹೋಗಬೇಕು. 
 6. ಕೊನೆಯ ಕಾಳನ್ನು ಹಂಚಿ, ಮುಂದಿನ ಗುಳಿ ಖಾಲಿ ಇದ್ದರೆ, ಆದರೆ ಮುಂದಿನ ಗುಳಿಯಲ್ಲಿರುವ ಕಾಯಿಗಳನ್ನು   ಆಡುತ್ತಿದ್ದವರು ತೆಗೆದುಕೊಳ್ಳಬೇಕು. ಇದಕ್ಕೆ ಪೆತ್ತ/ಹೆಗ್ಗ/ಪಂತ/ಪಣತ ತೆಗೆದುಕೊಳ್ಳುವುದು ಅಂತ ಹೇಳುತ್ತಾರೆ. 
 7. ಆಟ ಆಡುವಾಗ, ಆಟಗಾರರು ಅವರವರ ಬದಿಯಲ್ಲಿ ಆಗುವ ಕರುಗಳನ್ನು ತೆಗೆದು ಕೊಳ್ಳಬಹುದು.
 8. ಯಾರೇ ಆಟ ಆಡುತ್ತಿರಲಿ, ಕರುಗಳು ಆ ಬದಿಯ ಆಟಗಾರರಿಗೆ ಸೇರಿದ್ದು. ಕರು ಕೊಳೆಯುವ ಮುಂಚೆ ತೆಗೆದುಕೊಳ್ಳಬೇಕು. 
 9. ಹೀಗೆ ಆಟ ಮುಗಿಯುವ ತನಕ ಆಡಬೇಕು. ಅಂದ್ರೆ, ಯಾವುದಾದರೂ ಒಂದು ಬದಿಯಲ್ಲಿ ಕಾಳುಗಳು ಖಾಲಿಯಾಗಬೇಕು, ಎದುರಾಳಿಗೆ ಆಟ ಆಡಲು ಗುಳಿಗಳೇ ಇರುವುದಿಲ್ಲ ಅಥವಾ ಒಂದೇ ಗುಳಿಯಲ್ಲಿ ಕಾಯಿಗಳು ಇರಬೇಕು.