ಅಳುಗುಳಿ ಮಣೆ – ಸಾದಾ ಆಟ

 1. ಬಹು ಪ್ರಚಲಿತದಲ್ಲಿ ಇರುವುದು ಈ ಆಟ. 
 2. ಆಡಲು ಇಬ್ಬರು ಬೇಕು. ೭ ಗುಣಿಯ ಮನೆಗೆ ೭೦ ಕಾಯಿಗಳು ಇರಬೇಕು.
 3. ಪ್ರತಿಯೊಂದು ಮನೆಗೆ ೫ ಕಾಳುಗಳನ್ನು ಹಾಕಬೇಕು. ಒಂದು ಬದಿಯ ೭ ಮನೆಗಳು ಒಬ್ಬರಿಗಾದರೆ, ಇನ್ನೊಂದು ಬದಿಯ ೭ ಮನೆಗಳು ಎದುರಾಳಿಗೆ. 
 4. ಆಟಗಾರ ೧ – ಅವರ ಬದಿಯ ಒಂದು ಮನೆಯಿಂದ ಅಪ್ರದಕ್ಷಿಣಕಾರವಾಗಿ ಮುಂದಿನ ಮನೆಗಳಿಗೆ ಒಂದೊಂದು ಕಾಯಿಯನ್ನು ಹಾಕುತ್ತ ಬರಬೇಕು. ಖಾಲಿಯಾದ ಮನೆಯ ಮುಂದಿನ ಮನೆಯ ಕಾಯಿಗಳನ್ನು ತೆಗೆದುಕೊಂಡು ಮತ್ತೆ  ಎಲ್ಲ ಮನೆಗಳಿಗೆ ಹಾಕುತ್ತ ಬರಬೇಕು. 
 5. ಕೈಯಲ್ಲಿ ಕಾಳು ಖಾಲಿಯಾದಾಗ, ಮುಂದಿನ ಮನೆ ಖಾಲಿ ಇದ್ದರೆ, ಅದನ್ನು ಒಮ್ಮೆ ಸವರಿ ಅದರ ಮುಂದಿನ ಮನೆಯಲ್ಲಿ ಇರುವ ಅಷ್ಟು ಕಾಳುಗಳನ್ನು ತೆಗೆದುಕೊಂಡು ಎದುರಾಳಿಗೆ ಆಟವನ್ನು ಬಿಟ್ಟು ಕೊಡಬೇಕು. 
 6. ಒಮ್ಮೆ, ಕೈಯಲ್ಲಿಕಾಳು ಖಾಲಿಯಾಗಿದ್ದು, ಮುಂದಿನ ಮನೆ ಖಾಲಿ ಇದ್ದು, ಅದರ ಮುಂದಿನ ಮನೆನೂ ಖಾಲಿ ಇದ್ದಾರೆ ಆಟಗಾರನಿಗೆ ಯಾವ ಪತ್ತವೂ ಸಿಗುವುದಿಲ್ಲ. 
 7.  ಎದುರಾಳಿ ಆಟಗಾರನು ೩, ೪, ೫ ರಂತೆಯೇ ಆಟ ಆಡುವುದು. 
 8. ಒಟ್ಟಿನಲ್ಲಿ ಆಟ ಮುಗಿಯುವುದು ಯಾವಾಗ ಅಂದ್ರೆ, ಯಾವುದಾದರೂ ಒಂದು ಬದಿಯಲ್ಲಿ ಕಾಳುಗಳು ಖಾಲಿಯಾಗಬೇಕು. ಅಥವಾ ಒಂಟಿ ಮನೆಯಲ್ಲಿ ಕಾಯಿಗಳು ಇರಬೇಕು. 
 9. ಈಗ ಮತ್ತೆ ಅವರ ಹತ್ತಿರ ಇರುವ ಕಾಳುಗಳನ್ನು ಒಂದು ಕಡೆಯಿಂದ ೫-೫ ಕಾಯಿಗಳಂತೆ ಹಂಚಬೇಕು. ಒಬ್ಬ ಆಟಗಾರನ ಹತ್ತಿರ ಕೇವಲ ೫ ಮನೆಗಳಿಗೆ ಹಾಕುವಷ್ಟು ಮಾತ್ರ ಕಾಯಿಗಳು ಇದ್ದರೆ, ಎದುರಾಳಿಯು ಕೂಡ ಅಷ್ಟೇ ಮನೆಗೆ ಕಾಯಿ ಹಾಕಬೇಕು. ಉಳಿದ ಕಾಯಿಗಳನ್ನು ತನ್ನ ಹತ್ತಿರವೇ ಇಟ್ಟುಕೊಂಡಿರಬೇಕು.  ಉದಾ: ಒಂದು ಸುತ್ತು ಸಾದಾ ಆಟ ಆದ ಮೇಲೆ, ಆಟಗಾರ ೧ ಹತ್ತಿರ ೨೬ ಕಾಯಿಗಳು, ಆಟಗಾರ ೨ ಹತ್ತಿರ ೪೪ ಕಾಯಿಗಳು ಇದೆ ಅಂತ ಇಟ್ಟುಕೊಳ್ಳೋಣ. ಆಟಗಾರ೧ ಕೇವಲ ೫ ಮನೆಗಳಿಗೆ ೫ ರಂತೆ ಕಾಯಿಗಳನ್ನು ಹಾಕಿ, ಒಂದು ಕಾಯಿ ತನ್ನ ಹತ್ತಿರ ಇಟ್ಟು ಕೊಂಡಿರುತ್ತಾನೆ. ಆಟಗಾರ೨ ಕೂಡ ೫ ಮನೆಗಳಿಗೆ ೫ ರಂತೆ ಕಾಯಿಗಳನ್ನು ಹಾಕಿ, ಉಳಿದ ೧೯ ಕಾಯಿಗಳನ್ನ   ತನ್ನ ಹತ್ತಿರ ಇಟ್ಟು ಕೊಂಡಿರುತ್ತಾನೆ. 
 10. ಈಗ ಗೆದ್ದವರು ಈಗ ಆಟ ಮತ್ತೆ ೩,೪,೫ ರಂತೆಯೇ ಆಡುವುದು, ಆಟ ಮುಗಿಯುವ ತನಕ. 
 11. ಹೀಗೆಯೇ ಸುಮಾರು ಸಲ ಆಡುತ್ತಾ ಎಲ್ಲ ಕಾಯಿಗಳು ಒಬ್ಬರ ಹತ್ತಿರ ಬರಬೇಕು. ಅವರು ಗೆದ್ದಂತೆ!
 12. ಆಟ ಒಮ್ಮೊಮ್ಮೆ ೫-೧೦ ನಿಮಿಷದಲ್ಲಿ ಮುಗಿಯುವುದು ಇದೆ. ಕೆಲವೊಮ್ಮೆ ಗಂಟೆಗಟ್ಟಲೆ ಎಳೆಯುವುದು ಇದೆ. 

ಗಮನಿಸಿ:  ಈ ಆಟವನ್ನು ಉತ್ತರ ಕರ್ನಾಟಕದಲ್ಲಿ ೪ ಕಾಯಿಗಳೊಂದಿಗೆ, ಮೈಸೂರು, ದಕ್ಷಿಣ ಕನ್ನಡ ಮತ್ತು ಕರಾವಳಿ  ಪ್ರದೇಶದಲ್ಲಿ ೫ ಕಾಯಿಗಳೊಂದಿಗೆ, ತಮಿಳ್ನಾಡು ಆಂಧ್ರದ ಕಡೆ ೬ ಕಾಯಿಗಳೊಂದಿಗೆ ಆಡುವುದು   ಬಳಕೆಯಲ್ಲಿ ಇದೆ.