ಅಳುಗುಳಿ ಮಣೆ – ಸೀತೆ ಆಟ

  1. ಇದನ್ನು ಬಹುವಾಗಿ ಸೀತೆಯ ಆಟ ಅಂತ ಗುರುತಿಸುವುದು. ಸೀತೆಯು ಲಂಕೆಯ ಅಶೋಕವನದಲ್ಲಿ ಇದ್ದಾಗ , ಬೇಸರ ಕಳೆಯಲು, ರಾಮನನ್ನು ನೆನೆಯಲು ಈ ಆಟವನ್ನು ಆಡುತಿದ್ದಳು ಅನ್ನುವ ಪ್ರತೀತಿ ಇದೆ. 
  2.  ಒಬ್ಬರು ಸಾಕು ಆಡಲು. 
  3. ಒಂದು ಬದಿಯಲ್ಲಿ ಒಂದೊಂದು ಮನೆಗೆ ಕ್ರಮವಾಗಿ 7,6,5,4,3,2,1 ಕಾಯಿಗಳನ್ನು ಎಡದಿಂದ ಬಲಕ್ಕೆ ಹಾಕುತ್ತ ಬರಬೇಕು. ಮತ್ತೆ 7,6,5,4,3,2,1 ಕಾಯಿಗಳನ್ನ ಹಾಕುತ್ತ ಬರಬೇಕು. ಇಲ್ಲಿಗೆ ಆಟಕ್ಕೆ ಸಿದ್ಧತೆ ಮಾಡಿಕೊಂಡಂತೆ. 
  4. ಯಾವದಾದರೂ ಒಂದು ಮನೆಯಿಂದ ಕಾಯಿಗಳನ್ನು ಎತ್ತಿಕೊಂಡು ಮುಂದಿನ ಮನೆಗಳಿಗೆ ಹಂಚುತ್ತಾ ಹೋಗಬೇಕು. ಯಾವ ಮನೆಯಲ್ಲಿ ಕಾಳು ಖಾಲಿ ಆಗುತ್ತೋ, ಅದರ ಮುಂದಿನ ಮನೆಯಿಂದ ಕಾಳುಗಳನ್ನು ಎತ್ತಿ ಮತ್ತೆ ಹಂಚುತ್ತಾ ಹೋಗಬೇಕು. 
  5. ಈ ಆಟದಲ್ಲಿ ನಮಗೆ ಯಾವಾಗಲೂ ಕಾಳುಗಳು ದೊರೆಯುತ್ತಲೇ ಇರುತ್ತದೆ. ಅದೆಷ್ಟೋ ಸುತ್ತುಗಳು ಆದ ಮೇಲೆ ಕಾಳುಗಳು ತಮ್ಮ ತಮ್ಮ ಪ್ರಾಂಭದ ಮನೆಗೆ ಸೇರುತ್ತದೆ. 
  6. ಈ ಆಟದಲ್ಲಿ ಎಲ್ಲೂ ನಮಗೆ ಖಾಲಿ ಮನೆ ಸಿಗುವುದಿಲ್ಲ. 

    ಹಾಗೆ ಸುಮ್ಮನೆ ಒಂದು ಪಂಥ: ಎಷ್ಟು ಸುತ್ತು ಆದ ಮೇಲೆ ಮೊದಲ ಮನೆಗೆ ಕಾಲುಗಳು ಬರುತ್ತದೆ. ಇದು ಗಣಿತದ ಯಾವ ಅಂಶವನ್ನು ತೋರಿಸುತ್ತದೆ ?